ಬೀದರ್ನಲ್ಲಿ ಧಾರಾಕಾರ ಮಳೆ: ರೈತರ ಮೊಗದಲ್ಲಿ ಮೂಡಿದ ಮಂದಹಾಸ - ಬೀದರ್ನಲ್ಲಿ ಮಳೆ
ಬೀದರ್: ಬೇಸಿಗೆ ಧಗೆಯಿಂದ ಬೆಂದು ಹೋಗಿದ್ದ ಗಡಿ ಜಿಲ್ಲೆಯಲ್ಲಿ ಗುಡುಗು ಸಹಿತ ಧಾರಾಕಾರ ಮಳೆಯಾಗಿದ್ದು, ಅನ್ನದಾತನ ಮೊಗದಲ್ಲಿ ಮಂದಹಾಸ ಮೂಡಿಸಿದೆ. ನಗರದ ಅಂಬೇಡ್ಕರ್ ವೃತ, ಕನ್ನಡಾಂಬೆ ವೃತ, ಬಸವೇಶ್ವರ ವೃತ, ನೌಬಾದ್, ಗುಂಪಾ ಹಾಗೂ ನಾವದಗೇರಿ ಬಡಾವಣೆಗಳಲ್ಲಿ ಒಂದು ಗಂಟೆಗಳ ಕಾಲ ಧಾರಾಕಾರವಾಗಿ ಮಳೆ ಸುರಿದಿದೆ. ಮುಂಗಾರು ಮಳೆ ನಗರದಲ್ಲಿ ಅಬ್ಬರಿಸಿದ್ರೆ, ಜಿಲ್ಲೆಯ ಬಸವಕಲ್ಯಾಣ, ಭಾಲ್ಕಿ, ಕಮಲನಗರ ಹಾಗೂ ಔರಾದ್ ತಾಲೂಕಿನಲ್ಲಿ ತುಂತುರು ಮಳೆಯಾಗಿದೆ. ಕಳೆದ ಒಂದು ವಾರದಿಂದ ಸುರಿಯುತ್ತಿರುವ ಮಳೆಯಿಂದಾಗಿ ರೈತರು ಮುಂಗಾರು ಹಂಗಾಮಿನ ಬಿತ್ತನೆ ಚಟುವಟಿಕೆ ಚುರುಕುಗೊಳಿಸಿದ್ದಾರೆ.