ಪ್ರವೇಶ ನಿರಾಕರಿಸಿದ್ದ ಗೊಲ್ಲರಹಟ್ಟಿ ಗ್ರಾಮಸ್ಥರಿಂದಲೇ ಸಂಸದರಿಗೆ ಅದ್ಧೂರಿ ಸ್ವಾಗತ - ಸಂಸದ ನಾರಾಯಣಸ್ವಾಮಿ
ತುಮಕೂರು: ಕಳೆದ ಕೆಲ ದಿನಗಳ ಹಿಂದೆ ಜಿಲ್ಲೆಯ ಪಾವಗಡ ತಾಲೂಕಿನ ಪೆಮ್ಮನಹಳ್ಳಿ ಗೊಲ್ಲರಹಟ್ಟಿಗೆ ಚಿತ್ರದುರ್ಗ ಸಂಸದ ಎ .ನಾರಾಯಣಸ್ವಾಮಿ ಅವರಿಗೆ ಪ್ರವೇಶ ನಿರಾಕರಿಸಿದ್ದು, ಭಾರೀ ಸದ್ದು ಮಾಡಿತ್ತು. ಇದರಿಂದ ಎಚ್ಚೆತ್ತುಕೊಂಡ ಜಿಲ್ಲಾಧಿಕಾರಿ ಹಾಗೂ ವಿವಿಧ ಮಠಾಧೀಶರು ಗ್ರಾಮಸ್ಥರ ಮನವೊಲಿಸಿ ಇಂದು ನಾರಾಯಣಸ್ವಾಮಿ ಅವರಿಗೆ ಆರತಿ ಬೆಳಗಿ, ಹೂವಿನ ಹಾರ ಹಾಕಿ ಪೂರ್ಣಕುಂಭ ಸ್ವಾಗತ ನೀಡುವ ಮೂಲಕ ಗ್ರಾಮಸ್ಥರೇ ಗೊಲ್ಲರ ಹಟ್ಟಿಗೆ ಬರಮಾಡಿಕೊಂಡರು. ಈ ವೇಳೆ ಶ್ರೀಕೃಷ್ಣ ಯಾದವಾನಂದ ಮಹಾಸ್ವಾಮೀಜಿ, ಡಾ ಶಾಂತವೀರ ಮಹಾಸ್ವಾಮೀಜಿ, ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ, ಇಮ್ಮಡಿ ಸಿದ್ದರಾಮೇಶ್ವರ ಮಹಾಸ್ವಾಮೀಜಿ, ಪುರುಷೋತ್ತಮಾನಂದಪುರಿ ಮಹಾಸ್ವಾಮೀಜಿ, ಹಿರಿಯೂರು ಶಾಸಕಿ ಪೂರ್ಣಿಮಾ, ಜಿಲ್ಲಾಧಿಕಾರಿ ರಾಕೇಶ್ ಕುಮಾರ್ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಂಶಿಕೃಷ್ಣ ಸೇರಿದಂತೆ ಮೊದಲಾದವರು ಹಾಜರಿದ್ದರು.