ಶೃಂಗಾರಗೊಳ್ಳುತ್ತಿರುವ ಚಿನ್ನದ ಅಂಬಾರಿ : ವಿಡಿಯೋ ನೋಡಿ - ಮೈಸೂರು ಅರಮನೆ ಚಿನ್ನದ ಅಂಬಾರಿ
ಮೈಸೂರು ದಸರಾ ವೈಭವ ಹಿನ್ನೆಲೆ ಜಂಬೂಸವಾರಿಗೆ ರಾಜಮನೆತನದಲ್ಲಿ ಇರುವ ಚಿನ್ನದ ಅಂಬಾರಿಯನ್ನು ಅರಮನೆ ಆಡಳಿತ ಮಂಡಳಿಗೆ ಹಸ್ತಾಂತರ ಮಾಡಲಾಯಿತು. ಬಳಿಕ ಮೈಸೂರು ಮಲ್ಲಿಗೆಯಿಂದ ಸಿಬ್ಬಂದಿ ಅಂಬಾರಿಯನ್ನು ಅಲಂಕಾರ ಮಾಡಿ, ಅಂಬಾರಿ ಒಳಗೆ ನಾಡ ಅಧಿದೇವತೆ ಚಾಮುಂಡಿ ತಾಯಿಯ ಉತ್ಸವ ಮೂರ್ತಿಯನ್ನು ಇಟ್ಟು , ಅಭಿಮನ್ಯು ಆನೆಯ ಮೇಲೆ ಕಟ್ಟುವ ಪ್ರಕ್ರಿಯೆ ಆರಂಭಮಾಡಲಾಗಿದೆ. ನಂತರ ಸಂಜೆ ಜಂಬೂಸವಾರಿಗೆ ಸಿಎಂ ಹಾಗೂ ಗಣ್ಯರು ಪುಷ್ಪಾರ್ಚನೆ ಮಾಡಲಿದ್ದಾರೆ.