ಬಂಡೆಗಳ ತೆರವು ಕಾರ್ಯಾಚರಣೆ ಮುಂದುವರಿಸಿರುವ ಎನ್ಡಿಆರ್ಎಫ್ - ಬಂಡೆ ಕಾರ್ಯಾಚರಣೆ
ಗಡಿ ಜಿಲ್ಲೆ ಬೆಳಗಾವಿಯಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಗೆ ಮನೆಗಳಷ್ಟೇ ಅಲ್ಲ, ಗುಡ್ಡಗಳು ಕುಸಿದು ಅವಾಂತರ ಸೃಷ್ಟಿಸುತ್ತಿವೆ. ಗೋಕಾಕ್ ನಗರದ ಮಲ್ಲಿಕಾರ್ಜುನ ಬೆಟ್ಟದ ಎರಡು ಬಂಡೆಗಳು ಮಳೆಗೆ ಕುಸಿಯುವ ಹಂತಕ್ಕೆ ತಲುಪಿದ್ದವು. ಈ ಕುರಿತು ಈ ಟಿವಿ ಭಾರತ ವರದಿ ಮಾಡಿತ್ತು. ವರದಿಗೆ ಎಚ್ಚೆತ್ತ ತಾಲೂಕು ಆಡಳಿತ ಬಂಡೆಗಳ ತೆರವು ಕಾರ್ಯಾಚರಣೆ ಕೈಗೆತ್ತಿಕೊಂಡಿದೆ. ಪುಣೆಯ ಎನ್.ಡಿ.ಆರ್.ಎಫ್ ತಂಡದ ನೇತೃತ್ವದಲ್ಲಿ ಕಳೆದ ಮೂರು ದಿನಗಳಿಂದ ಬಂಡೆಗಳ ತೆರವು ಕಾರ್ಯಾಚರಣೆ ನಡೆಯುತ್ತಿದೆ. ಕಾರ್ಯಾಚರಣೆ ಬಗ್ಗೆ ಎನ್.ಡಿ.ಆರ್.ಎಫ್ ಸಿಬ್ಬಂದಿ ಮಂಜುನಾಥ ಈಟಿವಿ ಭಾರತ ಪ್ರತಿನಿಧಿ ಜತೆಗೆ ಎಕ್ಸ್ಕ್ಲೂಸಿವ್ ಆಗಿ ಮಾತನಾಡಿದ್ದಾರೆ.
Last Updated : Oct 24, 2019, 11:18 PM IST