ರಮೇಶ್ ಪರ ಕಟೀಲ್ ಬ್ಯಾಟಿಂಗ್, ಲಖನ್‌ಗೆ ಗುಂಡೂರಾವ್ ಜೈ... ಯಾರಿಗೆ ಕರದಂಟು? - belagavi news
ಉಪಚುನಾವಣಾ ಸಮರಕ್ಕೆ ದಿನಗಣನೆ ಶುರುವಾಗಿದೆ. ಸಹೋದರರ ನಡುವಿನ ಜಟಾಪಟಿಯಿಂದಲೇ ರಾಜ್ಯದ ಗಮನ ಸೆಳೆದಿರುವ ಗೋಕಾಕ್ ಕ್ಷೇತ್ರ ರಂಗೇರುತ್ತಿದೆ. ಪ್ರಮುಖವಾಗಿ ಬಿಜೆಪಿ ಹಾಗೂ ಕಾಂಗ್ರೆಸ್ ಪಾಳಯಗಳು ತಮ್ಮ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಳ್ಳೋಕೆ ಜಿದ್ದಾಜಿದ್ದಿನ ಕಸರತ್ತು ನಡೆಸುತ್ತಿವೆ. ಬಿಜೆಪಿ ಅಭ್ಯರ್ಥಿಯಾಗಿ ರಮೇಶ್ ಜಾರಕಿಹೊಳಿ ಹಾಗೂ ಕಾಂಗ್ರೆಸ್ ಅಭ್ಯರ್ಥಿಯಾಗಿ ಲಖನ್ ಜಾರಕಿಹೊಳಿ ಚುನಾವಣಾ ಕಣದಲ್ಲಿದ್ದಾರೆ. ಎರಡೂ ಪಕ್ಷಗಳ ರಾಜ್ಯಾಧ್ಯಕ್ಷರು ನಿನ್ನೆ ಕರದಂಟು ನಗರಿಯಲ್ಲಿ ಭರ್ಜರಿ ಮತಬೇಟೆ ನಡೆಸಿದ್ದಾರೆ.