ಮೈಸೂರಿನಲ್ಲಿ ದಸರಾ ಗಜಪಡೆಗೆ 'ಗಾರ್ಡ್ ಆಫ್ ಹಾನರ್' : ವಿಡಿಯೋ - Welcome to Dasara Elephants in Mysuru
ಮೈಸೂರು : ಕಾಡಿನಿಂದ ಆಗಮಿಸಿದ ದಸರಾ ಗಜಪಡೆಯನ್ನು ಅರಮನೆ ಮುಖ್ಯ ದ್ವಾರದಲ್ಲಿ ಪೊಲೀಸ್ ಇಲಾಖೆಯಿಂದ ಗಾರ್ಡ್ ಆಫ್ ಹಾನರ್ ನೀಡುವ ಮೂಲಕ ಗೌರವಿಸಲಾಯಿತು. ರಾಜಾಡಳಿತ ಸಂದರ್ಭದಲ್ಲಿ ಮಹಾರಾಜರು ಅಂಬಾರಿಯಲ್ಲಿ ಕುಳಿತು ಜಂಬೂ ಸವಾರಿ ಹೋಗುವಾಗ ಗಾರ್ಡ್ ಆಫ್ ಹಾನರ್ ನೀಡಲಾಗ್ತಿತ್ತು. ಈಗ, ಅಂಬಾರಿ ಹೊತ್ತು ನಡೆಯುವ ಆನೆಗಳಿಗೆ ಅದೇ ರೀತಿ ಗೌರವ ಸಲ್ಲಿಸಲಾಗುತ್ತದೆ. ಇಂದಿನ ಗಾರ್ಡ್ ಆಫ್ ಹಾನರ್ ಕಾರ್ಯಕ್ರಮದಲ್ಲಿ ಸಚಿವರು, ಹಿರಿಯ ಅಧಿಕಾರಿಗಳು ಸೇರಿ ಗಣ್ಯರು ಪಾಲ್ಗೊಂಡಿದ್ದರು.
Last Updated : Oct 2, 2020, 5:46 PM IST