ನೆರೆ ಪರಿಹಾರದಲ್ಲಿ ಗೋಲ್ಮಾಲ್ ಆರೋಪ: 7 ಗ್ರಾಮಾಧಿಕಾರಿಗಳು ಅಮಾನತು, ತಹಶಿಲ್ದಾರ್ ವಿರುದ್ಧವೂ ಕೇಸ್ - 7 ಗ್ರಾಮಾಧಿಕಾರಿಗಳು ಅಮಾನತು, ತಹಶೀಲ್ದಾರ್ಗಳ ಮೇಲೆ ಎಫ್ಐಆರ್
ಕಳೆದ ವರ್ಷ ಮುಂಗಾರನ್ನು ನೆನಪಿಸಿಕೊಂಡರೆ ಈಗಲೂ ಕೂಡಾ ಉತ್ತರ ಕರ್ನಾಟಕದ ಜನ ಬೆಚ್ಚಿಬೀಳುತ್ತಾರೆ. ಭಾರಿ ಮಳೆಗೆ ಲಕ್ಷಾಂತರ ಜನ ಮನೆ ಕಳೆದುಕೊಂಡಿದ್ದರು. ಬೆಳೆಗಳು ನೆರೆ ಪಾಲಾಗಿದ್ದವು. ಆದರೆ ಈವರೆಗೂ ಕೂಡಾ ಸಂತ್ರಸ್ತರಿಗೆ ಪರಿಹಾರ ತಲುಪಿಲ್ಲ ಅನ್ನೂ ಆರೋಪಗಳು ಕೇಳಿ ಬರುತ್ತಿವೆ. ನೆರೆ ಪರಿಹಾರದ ಹೆಸರಿನಲ್ಲಿ ಗೋಲ್ಮಾಲ್ ನಡೆದಿದ್ಯಾ? ಅನ್ನೋ ಅನುಮಾನಗಳೂ ಇಲ್ಲಿನ ಜನರನ್ನು ಕಾಡುತ್ತಿವೆ.