ರೇಷನ್ ಅಂಗಡಿಯಲ್ಲಾದರೂ ಕುಡುಕರಿಗೆ ಎಣ್ಣೆ ಕೊಡಿ: ಸಾಮಾಜಿಕ ಹೋರಾಟಗಾರ
ಚಿಕ್ಕೋಡಿ : ಎಣ್ಣೆ ಇಲ್ಲದೇ ಪಾಪ ಕುಡುಕರ ಕೈ ನಡುಗುತ್ತಿವೆ ಅವರು ಹಿಂಸೆ ಪಟ್ಟುಕೊಳ್ಳುತ್ತಿದ್ದಾರೆ. ರೇಷನ್ ಅಂಗಡಿ ಮೂಲಕವಾದ್ರೂ ಕುಡುಕರಿಗೆ ಎಣ್ಣೆ ಕೊಡೊ ವ್ಯವಸ್ಥೆ ಮಾಡಿ ಎಂದು ಸಾಮಾಜಿಕ ಹೋರಾಟಗಾರ ಚಂದ್ರಕಾಂತ ಹುಕ್ಕೇರಿ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಕುಡುಕರು ಹೊಟ್ಟೆಗೆ ಅನ್ನ ಸಹ ತಿಂತಿಲ್ಲ. ಸರ್ಕಾರ ಈ ಕಡೆ ಸ್ವಲ್ಪ ಗಂಭೀರವಾಗಿ ಗಮನಹರಿಸಬೇಕು ಎಂದು ಮನವಿ ಮಾಡಿದ್ದಾರೆ.