ಪಾಕಿಸ್ತಾನ ಜಿಂದಾಬಾದ್ ಎಂದ ಯುವತಿ...ಕುಳಿತ ಜಾಗದಿಂದ ಓಡಿ ಬಂದು ಮೈಕ್ ಕಸಿದುಕೊಂಡ ಓವೈಸಿ! - ಪಾಕಿಸ್ತಾನ ಜಿಂದಾಬಾದ್ ಎಂದ ಯುವತಿ
ಬೆಂಗಳೂರು: ಕೇಂದ್ರ ಸರ್ಕಾರದ ಪೌರತ್ವ ತಿದ್ದುಪಡಿ ಕಾಯ್ದೆ ಹಾಗೂ ರಾಷ್ಟ್ರೀಯ ನಾಗರಿಕ ನೋಂದಣಿ ವಿರುದ್ಧ ನಡೆಯುತ್ತಿದ್ದ ಪ್ರತಿಭಟನೆಯಲ್ಲಿ ಯುವತಿಯೊಬ್ಬಳು ಪಾಕಿಸ್ತಾನ ಜಿಂದಾಬಾದ್ ಎಂದು ಕೂಗುತ್ತಿದ್ದಂತೆ ಆತಂಕದ ವಾತಾವರಣ ನಿರ್ಮಾಣಗೊಳ್ತು. ಈ ವೇಳೆ, ವೇದಿಕೆ ಮೇಲಿದ್ದ ಸಂಸದ ಅಸಾದುದ್ದೀನ್ ತಕ್ಷಣವೇ ವೇದಿಕೆಗೆ ಆಗಮಿಸಿ ಯುವತಿ ಕೈಯಲ್ಲಿದ್ದ ಮೈಕ್ ಕಸಿದುಕೊಂಡು ಆಕ್ರೋಶ ಹೊರಹಾಕಿದ್ದಾರೆ.