150 ದಿನ ಪೂರೈಸಿರುವ 'ಗಿರಿಗಿಟ್' ಚಲನಚಿತ್ರದ ವಿಜಯೋತ್ಸವ ಕಾರ್ಯಕ್ರಮ - ಮಂಗಳೂರು ಗಿರಿಗಿಟ್ ಚಲನಚಿತ್ರ
ಮಂಗಳೂರು: ಗಿರಿಗಿಟ್ ಚಲನಚಿತ್ರ ಕುಟುಂಬದ ಎಲ್ಲಾ ಸದಸ್ಯರು ಒಟ್ಟಿಗೆ ಕೂತು ನೋಡುವ ಚಲನಚಿತ್ರ. ಇದು ಇತ್ತೀಚೆಗೆ ಬಂದ ಉತ್ತಮ ಹಾಸ್ಯ ಪ್ರಧಾನ ಚಲನಚಿತ್ರ ಎಂದರೆ ತಪ್ಪಿಲ್ಲ. ಸಂಬಂಧಗಳನ್ನು ಯಾವ ರೀತಿ ಬೆಳೆಸಬಹುದು ಎಂಬ ಶ್ರೇಷ್ಠ ಚಿಂತನೆಯ ಚಲನಚಿತ್ರ ಇದು ಎಂದು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ದಯಾನಂದ ಕತ್ತಲ್ಸಾರ್ ಹೇಳಿದರು. ನಗರದ ಪುರಭವನದಲ್ಲಿ ನಡೆದ 150 ದಿನ ಪೂರೈಸಿರುವ ಗಿರಿಗಿಟ್ ಚಲನಚಿತ್ರದ ವಿಜಯೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಗಿರಿಗಿಟ್ ಚಲನಚಿತ್ರ ಮುನ್ನೂರು ದಿನ ಪೂರೈಸಲಿ ಎಂದು ಹೇಳಿದರು. ಈ ಸಂದರ್ಭ ಚಲನಚಿತ್ರದಲ್ಲಿ ದುಡಿದ ತಂತ್ರಜ್ಞಾನ ಕಲಾವಿದರಿಗೆ ನೆನಪಿನ ಕಾಣಿಕೆ ನೀಡಲಾಯಿತು.