ಬಂಟ್ವಾಳ: ಬಾನೆತ್ತರದಲ್ಲಿ ಹಾರಿದ ತ್ರಿವರ್ಣ ಧ್ವಜ - ಗಣರಾಜ್ಯೋತ್ಸವ ಸಂಭ್ರಮ
ಗಣರಾಜ್ಯೋತ್ಸವ ಸಂಭ್ರಮದಲ್ಲಿ ಬಂಟ್ವಾಳದ ಮಿನಿ ವಿಧಾನಸೌಧದ ಮುಂಭಾಗ ಕ್ರೇನ್ ಮೂಲಕ 195 ಅಡಿ ಎತ್ತರದಲ್ಲಿ ತ್ರಿವರ್ಣ ಧ್ವಜ ಹಾರಿಸಲಾಯಿತು. ಶ್ರೀನಾಥ ಪ್ರಭು ಮಾಲೀಕತ್ವದ ವಿಜಯಲಕ್ಷ್ಮಿ ಸ್ಟೀಲ್ಸ್ನ ಗಜಲಕ್ಷ್ಮಿ ಕ್ರೇನ್ಸ್ ವತಿಯಿಂದ ಈ ಬಾವುಟ ಹಾರಿಸಲಾಗಿದೆ. ಸುಮಾರು 18 ಅಡಿ ಅಗಲ, 32 ಅಡಿ ಉದ್ದವಾಗಿರುವ ಈ ಧ್ವಜ ಸಾರ್ವಜನಿಕರ ಗಮನ ಸೆಳೆದಿದೆ.