ಘಟಪ್ರಭಾ ನದಿ ಪ್ರವಾಹ: ಮುಧೋಳ, ಜಮಖಂಡಿ, ಮಹಾಲಿಂಗಪುರ ಸಂಚಾರ ಅಸ್ತವ್ಯಸ್ತ - Karnataka flood 2019 Aug
ಬಾಗಲಕೋಟೆ: ಘಟಪ್ರಭಾ ನದಿ ಪ್ರವಾಹದಿಂದ ಮುಧೋಳ ನಗರಕ್ಕೆ ಪ್ರವಾಹ ಉಂಟಾಗಿದ್ದು, ಜಮಖಂಡಿ ಮಾರ್ಗದ ಪ್ರಮುಖ ಸಂಚಾರ ಸ್ಥಗಿತಗೊಂಡಿದೆ. ಮುಧೋಳ, ಜಮಖಂಡಿ ಹಾಗೂ ಮಹಾಲಿಂಗಪುರ ಮಾರ್ಗದಲ್ಲಿ ಸಂಚರಿಸಲು ಪರದಾಡುವಂತಾಗಿದೆ. ಯಾತ್ರಿ ನಿವಾಸಕ್ಕೆ ನೀರು ನುಗ್ಗಿದ್ದು, ಅಕ್ಕಪಕ್ಕದ ಅಂಗಡಿ ಮುಂಗಟ್ಟುಗಳು ಹಾಗೂ ಪೆಟ್ರೋಲ್ ಬಂಕ್ ಜಲಾವೃತಗೊಂಡಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ.
Last Updated : Aug 10, 2019, 10:32 PM IST