ಮೌಢ್ಯದಿಂದ ಹೊರ ಬನ್ನಿ, ಗ್ರಹಣದ ವೇಳೆ ನೀರು-ಆಹಾರ ಸೇವಿಸಿ: ವಿಜ್ಞಾನಿ ರಾಜಶೇಖರ ಪಾಟೀಲ - ಸೂರ್ಯ ಗ್ರಹಣ
ಬೆಳಗಾವಿ: ಗ್ರಹಣದ ವೇಳೆ ಆಹಾರ, ನೀರು ಸೇವಿಸಬಾರದು ಎಂಬುದು ತಪ್ಪು ಕಲ್ಪನೆ. ಸೂರ್ಯ ಗ್ರಹಣದ ಸಂದರ್ಭದಲ್ಲಿ ವಿಕಿರಣ ಭೂಮಿ ಮೇಲೆ ಬೀಳುವುದಿಲ್ಲ. ಹೀಗಾಗಿ ಗ್ರಹಣದ ನಂತರ ಪವಿತ್ರವಾದ ನೀರು, ಆಹಾರ ಹಾಳು ಮಾಡಬಾರದು. ಮೌಢ್ಯದಿಂದ ಹೊರ ಬಂದು ಗ್ರಹಣದ ವೇಳೆಯೂ ಆಹಾರ ಸೇವಿಸುವಂತೆ ಬೆಳಗಾವಿಯ ನಾಗಲೋಟಿಮಠ ವಿಜ್ಞಾನ ಕೇಂದ್ರದ ಯೋಜನಾ ನಿರ್ದೇಶಕ ರಾಜಶೇಖರ ಪಾಟೀಲ ಮನವಿ ಮಾಡಿದ್ದಾರೆ.