ಲಕ್ಷಾಂತರ ಭಕ್ತರಿಂದ ಕಳೆಗಟ್ಟಿದ ಗವಿಮಠ ಜಾತ್ರೆ - ಕೊಪ್ಪಳ ಗವಿಸಿದ್ದೇಶ್ವರ ಜಾತ್ರೆ
ಕೊಪ್ಪಳದ ಗವಿಸಿದ್ದೇಶ್ವರ ಜಾತ್ರಾಮಹೋತ್ಸವಕ್ಕೆ ವಿವಿಧ ಗ್ರಾಮಗಳಿಂದ ಪಾದಯಾತ್ರೆ ಮೂಲಕ ಭಕ್ತರ ಆಗಮನ. ಪಾದಯಾತ್ರೆ ಮೂಲಕ ಬರುವ ಭಕ್ತಾಧಿಗಳಿಗೆ ಮಾರ್ಗ ಮಧ್ಯದಲ್ಲಿ ಬಾದಾಮಿ ಹಾಲು ವಿತರಣೆ ಮಾಡಲಾಯಿತು. ಶ್ರೀ ಗವಿಸಿದ್ದೇಶ್ವರ ಡೆಕೋರೇಟರ್ಸ ಸಂಘದ ವತಿಯಿಂದ ಬದಾಮಿ ಹಾಲು ವಿತರಣೆ ಮಾಡಲಾಗುತ್ತಿದ್ದು ನಗರದ ನಾಲ್ಕು ದಿಕ್ಕುಗಳಲ್ಲಿಯೂ ಪಾದಯಾತ್ರಿಗಳಿಗೆ ಬದಾಮಿ ಹಾಲು ವಿತರಣೆ ಮಾಡುತ್ತಿದ್ದಾರೆ. ಜಾತ್ರೆಗಾಗಿ ಭಕ್ತರು ತಮ್ಮ ತಮ್ಮ ಗ್ರಾಮಗಳಿಂದ ತಡರಾತ್ರಿಯಿಂದ ಪಾದಯಾತ್ರೆ ಮೂಲಕ ಆಗಮಿಸುತ್ತಿದ್ದಾರೆ