ಕರ್ನಾಟಕ

karnataka

ETV Bharat / videos

ಶಿವಮೊಗ್ಗದಲ್ಲಿ ಶ್ರೇಷ್ಠಿ ಪಾರ್ಕ್​ನಲ್ಲಿ ಸರಳವಾಗಿ ಗೌರಿ ಹಬ್ಬ ಆಚರಣೆ - Gauri festival celebration

By

Published : Aug 21, 2020, 4:32 PM IST

ಶಿವಮೊಗ್ಗ: ಗೌರಿ ಹಬ್ಬದ ನಿಮಿತ್ತ ನಗರದ ರಾಮಣ್ಣ ಶ್ರೇಷ್ಠಿ ಪಾರ್ಕ್ ಗಣಪತಿ ದೇವಾಲಯದಲ್ಲಿ ಗೌರಿ ಮೂರ್ತಿಯನ್ನು ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಲಾಗುತ್ತಿದೆ. ಭಕ್ತಾದಿಗಳು ಕುಟುಂಬ ಸಮೇತರಾಗಿ ದೇವಸ್ಥಾನಕ್ಕೆ ಬಂದು ಗೌರಿಯ ದರ್ಶನ ಪಡೆದುಕೊಳ್ಳುತ್ತಿದ್ದಾರೆ. ರಾಮಣ್ಣ ಶ್ರೇಷ್ಠಿ ಪಾರ್ಕ್​ನಲ್ಲಿ ಗೌರಿ ಹಾಗೂ ಗಣೇಶ ಪ್ರತಿಷ್ಠಾಪನೆಗೆ 91 ವರ್ಷಗಳ ಇತಿಹಾಸ ಇದೆ. ಇದೇ ಮೊದಲ ಬಾರಿಗೆ ಗೌರಿಹಬ್ಬವನ್ನು ಸರಳವಾಗಿ ಆಚರಿಸಲಾಗುತ್ತಿದೆ. ಪ್ರತಿವರ್ಷ ಅದ್ದೂರಿಯಾಗಿ 21 ದಿನಗಳ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿದ್ದವು. ಆದರೆ, ಈ ವರ್ಷ ಕೊರೊನಾ ಭೀತಿಯಿಂದ ಸರಳವಾಗಿ ಗೌರಿ - ಗಣೇಶ ಹಬ್ಬವನ್ನು ಆಚರಿಸಲಾಗುತ್ತಿದೆ. ಜಿಲ್ಲಾಡಳಿತದ ಎಲ್ಲ ನಿಯಮಗಳೊಂದಿಗೆ ಗೌರಿಯನ್ನು ಪ್ರತಿಷ್ಠಾಪಿಸಿ, ಭಕ್ತಾದಿಗಳ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ ಎಂದು ದೇವಸ್ಥಾನ ಕಮಿಟಿ ಖಜಾಂಚಿ ಮಾಹಿತಿ ನೀಡಿದರು.

ABOUT THE AUTHOR

...view details