ಪರಿಸರ ಪ್ರೇಮ ಮೆರೆದ ಚಿನ್ನದ ವ್ಯಾಪಾರಿ - ಇವ್ರ ಮನೆಯೇ ಈಗ ಹೂದೋಟ - ವಿಜಯಪುರ ಹೂದೋಟ ನ್ಯೂಸ್
ವಿಜಯಪುರ: ನಗರದ ರಾಮಮಂದಿರ ರಸ್ತೆಯಲ್ಲಿರುವ ಚಿನ್ನದ ವ್ಯಾಪಾರಿ ಸಚಿನ್ ಪಂಡಿತ ಕುಟುಂಬ ತಮ್ಮ ಮನೆಯನ್ನು ಹೂ ತೋಟವಾಗಿ ಮಾಡಿಕೊಂಡಿದ್ದಾರೆ. ಮನೆಯ ಅಂದ ಹೆಚ್ಚಿಸುವುದು, ಪರಿಸರ ಪ್ರೇಮದ ಜೊತೆಗೆ ಆರೋಗ್ಯ ಕಾಪಾಡುವುದು ಇವರ ಉದ್ದೇಶವಾಗಿದೆ. ಅವರ ಮನೆಯೊಳಗೆ ಹೋದರೆ ಸಾಕು, ಎಲ್ಲ ಕಡೆಯೂ ಹೂವಿನ ಗಿಡಗಳೇ ಕಾಣ ಸಿಗಲಿದ್ದು, ಸುಮಾರು 250ಕ್ಕೂ ಹೆಚ್ಚು ಗಿಡಗಳನ್ನು ಬೆಳೆದಿದ್ದಾರೆ.