ತೋಟ ಕಾಯಲು ಬೇಕಿಲ್ಲ ಆಳುಗಳು... ಈ ಒಂದು ಪಕ್ಷಿ ಕಾಯುತ್ತೆ ಕಾವಲು! - ಉಷ್ಟ್ರಪಕ್ಷಿ
ತೋಟ ಹಾಗೂ ಮನೆಗಳನ್ನು ಕಾಯಲು ನಾಯಿಗಳನ್ನು ಸಾಕುವುದು ಕಾಮನ್. ಆದ್ರೇ ಕೋಟೆನಾಡು ಚಿತ್ರದುರ್ಗದಲ್ಲಿ ಮಾತ್ರ ತೋಟ ಕಾಯಲು ಕಾವಲುಗಾರನನ್ನಾಗಿ ಪಕ್ಷಿ ನಿಯೋಜನೆಗೊಂಡಿದೆ. ಅಚ್ಚರಿ ಎಂಬಂತೆ ಇಡೀ ತೋಟವನ್ನು ಈ ಒಂದು ಪಕ್ಷಿ ಕಾಯುತ್ತಂತೆ. ಹೊಸಬರು ತೋಟದಲ್ಲಿ ಬರದಂತೆ ಚಾಚು ತಪ್ಪದೆ ನೋಡಿಕೊಳ್ಳುತ್ತದೆ.