ಕೆಟ್ಟು ನಿಂತ ತ್ಯಾಜ್ಯ ವಿಂಗಡನಾ ಯಂತ್ರ: ಇಬ್ಬನಿ ನಗರಿಯಲ್ಲಿ ಉಲ್ಭಣಿಸುತ್ತಿದೆ ಕಸದ ರಾಶಿ - ಮಡಿಕೇರಿಯಲ್ಲಿ ಕಸದ ರಾಶಿ ಕುರಿತ ಸುದ್ದಿ
ಕೊಡಗು: ದಕ್ಷಿಣ ಕಾಶ್ಮೀರವೆಂದೇ ಹೆಸರಾಗಿರುವ ಪ್ರವಾಸಿಗರ ನೆಚ್ಚಿನ ತಾಣ, ಇಬ್ಬನಿ ನಗರ ಮಡಿಕೇರಿಯಲ್ಲಿ ಇದೀಗ ಕಸದ ಸಮಸ್ಯೆ ಉಲ್ಭಣಿಸಿದೆ. ಕಳೆದೆರಡು ವರ್ಷಗಳಿಂದ ಸುರಿದ ಧಾರಾಕಾರ ಮಳೆಗೆ ಹಸಿ ಹಾಗೂ ಒಣ ತ್ಯಾಜ್ಯಗಳನ್ನು ವೈಜ್ಞಾನಿಕವಾಗಿ ವಿಂಗಡಿಸುವ ಮತ್ತು ಕಸವನ್ನು ಗೊಬ್ಬರವನ್ನಾಗಿ ಪರಿವರ್ತಿಸುವ ಯಂತ್ರೋಪಕರಣಗಳು ಕೆಟ್ಟು ನಿಂತಿರುವುದರಿಂದ ಕಸದ ರಾಶಿ ಬೆಟ್ಟದಂತೆ ಬೆಳೆಯುತ್ತಿದೆ.