ದೇಶ ಸೇವೆ ಸಲ್ಲಿಸಿ ಸ್ವಗ್ರಾಮಕ್ಕೆ ಬಂದ ಯೋಧರಿಗೆ ಸನ್ಮಾನ - ಹುಬ್ಬಳ್ಳಿ ಲೇಟೆಸ್ಟ್ ನ್ಯೂಸ್
ಹುಬ್ಬಳ್ಳಿ : ದೇಶ ಸೇವೆ ಸಲ್ಲಿಸಿ ತಮ್ಮ ತವರಿಗೆ ಮರಳಿದ ಯೋಧರಿಗೆ ಗ್ರಾಮಸ್ಥರೆಲ್ಲ ಸೇರಿ ಗೌರವಿಸಿದರು. ತಾಲೂಕಿನ ದೇವರಗುಡಿಹಾಳ ರೋಡಿನ ಗಂಗಿವಾಳ ಗ್ರಾಮದ ಮಂಜುನಾಥಗೌಡ, ಬೈರನಗೌಡ ಶೆಟ್ಟನಗೌಡ್ರು ಮತ್ತು ಮಾಂತೇಶ್ ಎಂಬ ಯೋಧರಿಗೆ ಸನ್ಮಾನ ಮಾಡಲಾಯಿತು. ರಾಘವೇಂದ್ರ ಸದಾವರ್ತಿ ಜ್ಞಾನ ಸಂಕಲ್ಪ ಕಾನ್ವೆಂಟ್ ಶಾಲೆ ಸಂಸ್ಥಾಪಕರು ಮತ್ತು ರಾಯನಾಳ ಪಂಚಾಯತ್ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಗ್ರಾಮದ ಹಿರಿಯರು ಸೇರಿ ಸನ್ಮಾನಿಸಿದ್ದು ವಿಶೇಷ.