ಗಂಗಾವತಿ ಈಜುಕೊಳದಲ್ಲಿ ಪಾಚಿ ನೀರು.. ತರಾತುರಿಯಲ್ಲಿ ಉದ್ಘಾಟನೆಯಾದ ಪೂಲ್ನಲ್ಲಿ ಸೌಲಭ್ಯಗಳು ಮಾಯ - ಸ್ವಿಮ್ಮಿಂಗ್ ಪೂಲ್
ಎಲ್ಲ ವರ್ಗದ ಜನರಿಗೂ ಖಾಸಗಿ ಸ್ವಿಮ್ಮಿಂಗ್ ಪೂಲ್ಗೆ ಹೋಗಲು ಆಗೋದಿಲ್ಲ. ಹೀಗಾಗಿ, ಸಾಮಾನ್ಯ ಜನರು ಕೂಡ ಈಜುಕೊಳಕ್ಕೆ ಬರಲಿ ಎಂಬ ಉದ್ದೇಶದಿಂದ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯು ಸ್ವಿಮ್ಮಿಂಗ್ ಪೂಲ್ ನಿರ್ಮಾಣ ಮಾಡಿದೆ. ಆದರೆ, ಅದನ್ನು ಸರಿಯಾಗಿ ನಿರ್ವಹಣೆ ಮಾಡದೆ ಇರುವುದರಿಂದ ಇದ್ದೂ ಇಲ್ಲದಂತಾಗುತ್ತಿದೆ. ಅದಕ್ಕೆ ತಾಜಾ ಉದಾಹರಣೆ ಕೊಪ್ಪಳ ಜಿಲ್ಲೆಯ ಗಂಗಾವತಿಯಲ್ಲಿರುವ ಈಜುಕೊಳ. ಏನಿದರ ಕಥೆ ಅಂತೀರಾ, ಹಾಗಾದ್ರೆ ಈ ಸ್ಟೋರಿ ನೋಡಿ...