ಹುಬ್ಬಳ್ಳಿ- ಬಳ್ಳಾರಿಯಲ್ಲಿ ಗಣೇಶನಿಗೆ ಅದ್ಧೂರಿ ಬೀಳ್ಕೊಡುಗೆ ! - ganesha nimajjanam at ballary
ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಪ್ರತಿಷ್ಠಾಪಿಸಲಾಗಿದ್ದ ವಿಗ್ನವಿನಾಶಕ ಗಣೇಶ ನನ್ನು ಅದ್ಧೂರಿಯಾಗಿ ಬೀಳ್ಕೊಡಲಾಯಿತು. ನಗರದ ಪ್ರಮುಖ ರಸ್ತೆಯಲ್ಲಿ ಸಾಗಿದ ಬೃಹತ್ ಮೂರ್ತಿಗಳನ್ನು ಲಕ್ಷಾಂತರ ಜನರು ಕಣ್ತುಂಬಿಕೊಂಡರು. ಜೊತೆಗೆ ಗಣೇಶ ಮೆರವಣಿಗೆಯಲ್ಲಿ ಹೆಚ್ಚು ಗಮನ ಸೆಳೆದಿದ್ದು ಡಿಜೆ ಸೌಂಡ್, ಡಿಜೆ ಹಾಡಿಗೆ ಸಾವಿರಾರು ಸಂಖ್ಯೆಯಲ್ಲಿ ಯುವಕರು ಕುಣಿದು ಕುಪ್ಪಳಿಸಿ ಅದ್ದೂರಿಯಾಗಿ ಗಣೇಶನನ್ನು ಕಳುಹಿಸಿಕೊಟ್ಟಿದ್ದಾರೆ. ಇನ್ನು ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ನಗರದಲ್ಲಿ ಪ್ರತಿಷ್ಠಾಪಿಸಲಾದ ಹಿಂದೂ ಮಹಾಸಭಾದ ಗಣೇಶಮೂರ್ತಿ ನಿಮಜ್ಜನ ಸಹ ಅದ್ಧೂರಿ ಮೆರವಣಿಗೆ ಮುಖೇನ ಶಾಂತಿಯುತವಾಗಿ ನಡೆಯಿತು. ಕಳೆದ 12 ದಿನಗಳಕಾಲ ನಗರದ ವಿವಿಧೆಡೆ ಪ್ರತಿಷ್ಠಾಪಿಸಲಾಗಿದ್ದ ಈ ಗಣೇಶೋತ್ಸವ ಬಿಗಿಯಾದ ಪೊಲೀಸ್ ಸರ್ಪಗಾವಲಿನಲ್ಲಿ ತೆರೆ ಕಂಡಿತು.