ಕೊಪ್ಪಳದಲ್ಲಿ ಗಣೇಶ ನಿಮಜ್ಜನ.. ಕುಣಿದು ಕುಪ್ಪಳಿಸಿದ ಯುವಕರು - ಸಾರ್ವಜನಿಕ ಗಣೇಶ
ಕೊಪ್ಪಳದಲ್ಲಿ ಐದನೇ ದಿನದ ಗಣೇಶ ನಿಮಜ್ಜನ ಅದ್ಧೂರಿಯಾಗಿ ನಡೆಯಿತು. ನಗರದಲ್ಲಿ ಪ್ರತಿಷ್ಠಾಪಿಸಲಾಗಿದ್ದ ಸುಮಾರು 70 ಕ್ಕೂ ಹೆಚ್ಚು ಸಾರ್ವಜನಿಕ ಗಣೇಶ ಮೂರ್ತಿಗಳನ್ನು ನಿಮಜ್ಜನ ಮಾಡಲಾಯಿತು. ವಿವಿಧ ವಾದ್ಯ, ಸಂಗೀತದೊಂದಿಗೆ ಅದ್ದೂರಿಯಾಗಿ ನಡೆದ ಮೆರವಣಿಗೆಯಲ್ಲಿ ಯುವಕರು ಕುಣಿದು ಕುಪ್ಪಳಿಸಿದರು. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ವ್ಯಾಪಕ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.