ಗಾಂಧಿಗೆ ಶ್ರದ್ಧಾಂಜಲಿ: ಮಾನವ ಸರಪಳಿ ನಿರ್ಮಾಣ ಮಾಡಿ ಪ್ರತಿಜ್ಞೆ - Gandhi's Martyrs' day gangavathi
ಗಂಗಾವತಿ: ರಾಷ್ಟ್ರಪಿತ ಮಹಾತ್ಮ ಗಾಂಧಿ ಹುತಾತ್ಮರಾದ ದಿನದ ನಿಮಿತ್ತ ವಿವಿಧ ಪ್ರಗತಿಪರ ಸಂಘಟನೆಗಳ ಮುಖಂಡರು, ಇಲ್ಲಿನ ಮಹಾತ್ಮಗಾಂಧಿ ವೃತ್ತದಲ್ಲಿ ಸೇರಿ ಶ್ರದ್ಧಾಂಜಲಿ ಸಲ್ಲಿಸಿದರು. ಬಳಿಕ ಮಾನವ ಸರಪಣಿ ನಿರ್ಮಿಸಿ ಕೋಮು ಸೌಹಾರ್ದತೆ ಕಾಪಾಡುವುದಾಗಿ ಪ್ರತಿಜ್ಞೆ ಸ್ವೀಕರಿಸಿದರು. ಮೊದಲಿಗೆ ಗಾಂಧಿ ಪುತ್ಥಳಿಗೆ ಮಾಲಾರ್ಪಣೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಹಿಂದೂ ರಕ್ತವಲ್ಲ ನಮ್ಮದು, ಮುಸ್ಲಿಂ ನೆತ್ತರಲ್ಲ ನಮ್ಮದು, ಕ್ರಿಶ್ಚಿಯನ್ನರ ರಕ್ತವೂ ಅಲ್ಲ, ನಮ್ಮದು ಭಾರತೀಯ ರಕ್ತ, ಕೋಮು ಸೌಹಾರ್ದತೆಯ ರಕ್ತ, ಗಾಂಧಿ ಕಂಡ ಕನಸು ನನಸು ಮಾಡುವೆವು ನಾವು ಎಂದು ಘೋಷಣೆ ಕೂಗಿದರು. ಇನ್ನು ಕಾರ್ಯಕ್ರಮದಲ್ಲಿ ಹಲವು ಸಂಘಟನೆಗಳ ಪ್ರಮುಖರು ಭಾಗಿಯಾಗಿದ್ದರು.