ಬಾಟಲ್ ಬಸವರಾಜು ಕೈಚಳಕದಿಂದ ಮೂಡಿಬಂದ ಗಾಂಧಿ ಫೋಟೋ.. - Modi photo in bottle
ಈ ಬಾರಿ ಗಾಂಧಿ ಜಯಂತಿಯನ್ನು ದೇಶಾದ್ಯಂತ ವಿಶೇಷವಾಗಿ ಆಚರಿಸಲಾಗುತ್ತಿದೆ. ಎಲ್ಲೆಡೆ ಪ್ಲಾಸ್ಟಿಕ್ ವಿರುದ್ಧ ಅರಿವು ಹಾಗೂ ಸ್ವಚ್ಛ ಭಾರತದ ಬಗ್ಗೆ ಅಭಿಯಾನಗಳು ನಡೆಯುತ್ತಿವೆ. ಈ ವಿಷಯವನ್ನೇ ಪ್ರಮುಖವಾಗಿಟ್ಟುಕೊಂಡು ಬೆಂಗಳೂರಿನ ಬಾಟಲ್ ಬಸವರಾಜ ಎಂದೇ ಖ್ಯಾತಿ ಪಡೆದಿರುವ ಬಸವರಾಜು, ಬಾಟಲ್ ಆರ್ಟ್ ಮೂಲಕ ಗಮನ ಸೆಳೆದಿದ್ದಾರೆ. ಗಾಂಧಿ ಜಯಂತಿ ಪ್ರಯುಕ್ತ ಸರ್ಜಿಕಲ್ ಬಾಟಲ್ ಬಳಸಿ ಗಾಂಧಿ ಹಾಗೂ ಮೋದಿಯವರ ಚಿತ್ರವನ್ನು ಬಾಟಲ್‌ನೊಳಗೆ ಪ್ರದರ್ಶಿಸಿದ್ದಾರೆ. ಅಲ್ಲದೆ ಸ್ವಚ್ಛ ಭಾರತ ಅಭಿಯಾನದ ಪ್ರಯುಕ್ತ ಸ್ಲೋಗನ್ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಅವರ 115ನೇ ಜನ್ಮದಿನ ಅಂಗವಾಗಿ ಅವರ ಛಾಯಾಚಿತ್ರವನ್ನು ಸಹ ಬಾಟಲ್‌ನೊಳಗೆ ತೋರಿಸಿ ಫೋಟೋ ಪ್ರೇಮ್ ಪ್ರದರ್ಶಿಸಿದ್ದಾರೆ.