ಶಿವಮೊಗ್ಗದಲ್ಲಿ ಗಾಂಧಿ ವೇಷಧಾರಿಯಿಂದ ವಿನೂತನ ಪ್ರತಿಭಟನೆ - ಶಿವಮೊಗ್ಗದಲ್ಲಿ ಗಾಂಧಿ ವೇಷಧಾರಿಯಿಂದ ವಿನೂತನ ಪ್ರತಿಭಟನೆ
ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕು ಪಂಚಾಯತ್ ಆವರಣದಲ್ಲಿ ಇಂದು ಗಾಂಧಿ ವೇಷಧಾರಿಯೊಬ್ಬರು ಕಸಗುಡಿಸುವ ಮೂಲಕ ವಿನೂತನ ಪ್ರತಿಭಟನೆ ನಡೆಸಿದ್ದಾರೆ. ತಾಳಗುಪ್ಪದ ನಿವಾಸಿ ಓಂಕಾರಪ್ಪ ಎಂಬುವವರು ತಾಳಗುಪ್ಪದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಚಾವಣಿ ರಿಪೇರಿಯಲ್ಲಿ ಎಂಜಿನಿಯರ್ ಒಬ್ಬರು ಗೋಲ್ಮಾಲ್ ನಡೆಸಿದ ಆರೋಪ ಸಾಬೀತಾಗಿದ್ದು, ಅವರ ವಿರುದ್ಧ ದೂರು ದಾಖಲಾಗಿದ್ದರೂ ಜಿಲ್ಲಾ ಪಂಚಾಯತ್ ಸಿಇಒ ಯಾವುದೇ ಕ್ರಮ ಜರುಗಿಸಿಲ್ಲ ಎಂದು ಓಂಕಾರಪ್ಪ ಈ ರೀತಿ ಕಸಗುಡಿಸಿ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.