ರಾಜ್ಯ ಬಜೆಟ್ ಬಗ್ಗೆ ಬೇಸರ ವ್ಯಕ್ತಪಡಿಸಿದ ಗದಗ ಜನತೆ - ಕರ್ನಾಟಕ ರಾಜ್ಯ ಬಜೆಟ್ 2020
ಗದಗ: ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಇಂದು ಮಂಡಿಸಿದ ಬಜೆಟ್ ಕುರಿತು ಗದಗ ಜಿಲ್ಲೆಯ ಜನತೆ ಬೇಸರ ವ್ಯಕ್ತಪಡಿಸಿದ್ದಾರೆ. ಯಾವುದಾದರೂ ಕೈಗಾರಿಕೆಗಳು, ಯೋಜನೆಗಳು, ಹಳೆಯ ಬಜೆಟ್ನ ಘೋಷಣೆಗಳು ಅನುಷ್ಠಾನಕ್ಕೆ ಬರುತ್ತವೆ ಎಂದು ಕಾಯುತ್ತಿದ್ದ ಜನರಿಗೆ ನಿರಾಶೆಯಾಗಿದೆ.ಇನ್ನು ಮಹದಾಯಿ ಯೋಜನೆ ಅನುಷ್ಠಾನಕ್ಕಾಗಿ ಸಾವಿರಕ್ಕೂ ಹೆಚ್ಚು ಕೋಟಿ ಹಣ ಬಿಡುಗಡೆ ಮಾಡುತ್ತಾರೆ ಎಂದು ಜಾತಕ ಪಕ್ಷಿಯಂತೆ ಕಾಯುತ್ತಿದ್ದ ಜನರಿಗೆ ಕೇವಲ 500 ಕೋಟಿ ರೂ ಅನುದಾನದ ಭರವಸೆ ನೀಡುವ ಮೂಲಕ ಮುಂಬೈ ಕರ್ನಾಟಕದ ಮಗ್ಗುಲನ್ನೇ ಮುರಿದಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.