ಶವಸಂಸ್ಕಾರಕ್ಕೂ ಮಳೆ ಅಡ್ಡಿ, ನೀರಿನಲ್ಲೇ ಕೆಟ್ಟು ನಿಂತ ಶಾಂತಿ ವಾಹನ.. - ಗದಗ ಮಳೆ ಅವಾಂತರ
ಗದಗನಲ್ಲಿ ಮಳೆರಾಯನ ಅವಾಂತರ ಇನ್ನೂ ನಿಂತಿಲ್ಲ. ಮಳೆ ನಿಂತರೂ ಮರದ ಹನಿ ನಿಂತಿಲ್ಲ ಎನ್ನುವಂತೆ ಮಳೆ ನೀರು ಶವಸಂಸ್ಕಾರಕ್ಕೂ ಅಡ್ಡಿ ಮಾಡಿದೆ. ಗದಗನ ರೆಹಮತ್ ನಗರದಲ್ಲಿ ನಡೆದ ಘಟನೆ ಇದಾಗಿದ್ದು ಬ್ರಿಡ್ಜ್ ಕೆಳಗೆ ನಿಂತಿರುವ ನೀರಿನಲ್ಲಿ ಶವಯಾತ್ರೆ ಸಾಗಿದೆ. ಈ ಮಧ್ಯೆ ಶವ ಸಾಗಿಸಬೇಕಾದ್ರೆ ರೈಲ್ವೆ ಅಂಡರ್ ಪಾಸ್‌ನಲ್ಲಿನ ನೀರಿನಲ್ಲಿ ಶವಯಾತ್ರೆ ವಾಹನ ಕೆಟ್ಟು ನಿಂತಿದೆ. ಪರಿಣಾಮ ನಡುನೀರಿನಲ್ಲಿ ಶವಯಾತ್ರೆ ವಾಹನ ಸಿಲುಕಿದ ಪರಿಣಾಮ ಶವ ಸಂಸ್ಕಾರಕ್ಕೆ ಅಡ್ಡಿಯಾಗಿದೆ. ಇದರಿಂದ ಮೃತರ ಕುಟುಂಬಸ್ಥರು ನೀರಿನಲ್ಲೇ ನಡೆದು ಸ್ಮಶಾನ ತಲುಪಿದ್ದಾರೆ.