ಕಿಡಿಗೇಡಿಗಳ ಕೃತ್ಯಕ್ಕೆ ಅನ್ನದಾತ ಕಂಗಾಲು...ಬೆಳೆದಿದ್ದ ಬೆಳೆ ನೀರು ಪಾಲು... - ಬೆಳೆದಿದ್ದ ಬೆಳೆ ನೀರು ಪಾಲು
ಇಷ್ಟು ದಿನ ಅತಿವೃಷ್ಠಿ ಅನಾವೃಷ್ಠಿಯಿಂದ ಕಂಗೆಟ್ಟಿದ್ದ ರೈತರಿಗೀಗ ಕಿಡಿಗೇಡಿಗಳ ಕಾಟ ಆರಂಭವಾಗಿದೆ. ಕೆರೆಯ ಕೋಡಿಗೆ ಇದ್ದ ಗೇಟನ್ನು ಕಿಡಿಗೇಡಿಗಳು ಹಾಳು ಮಾಡಿದ ಪರಿಣಾಮ ರೈತರ ಹೊಲದಲ್ಲಿನ ಕಾಲುವೆಗಳು ಒಡೆದು ಅಪಾರ ಪ್ರಮಾಣದ ಬೆಳೆ ನಾಶವಾಗಿದೆ. ಇದ್ರಿಂದ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲವಲ್ಲ ಎಂದು ಅನ್ನದಾತ ತಲೆ ಮೇಲೆ ಕೈಹೊತ್ತು ಕುಳಿತಿದ್ದಾನೆ.