ಸಾಮಾಜಿಕ ಅಂತರ ಮರೆತು ಪೆಟ್ರೋಲ್ಗೆ ಮುಗಿಬಿದ್ದ ಜನ: ಸಿಟ್ಟಿಗೆದ್ದ ಎಸ್ಪಿ - ಲಾಕ್ ಡೌನ್ 2.0 ನ್ಯೂಸ್
ಗದಗ : ಮಹಾಮಾರಿ ಕೊರೊನಾ ವೈರಸ್ ತಡೆಯಲು ಲಾಕ್ ಡೌನ್ 2.0 ಜಾರಿಗೊಳಿಸಿದ್ದರೂ ಗದಗ ಜಿಲ್ಲೆಯ ಜನರಿಗೆ ಇನ್ನೂ ಬುದ್ದಿ ಬಂದಿಲ್ಲ. ಇಂದು ಪೆಟ್ರೋಲ್ ಬಂಕ್ ಬಳಿ ಪೊಲೀಸರು ಎಷ್ಟೇ ನಿಯಂತ್ರಣ ಮಾಡಿದ್ದರೂ ಕೂಡ ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ಜನಜಂಗುಳಿ ಏರ್ಪಟ್ಟಿತ್ತು. ಇದರಿಂದ ಸಿಟ್ಟಿಗೆದ್ದ ಗದಗ ಎಸ್ಪಿ ಯತೀಶ್, ಗುಂಪು ಗುಂಪಾಗಿ ಪೆಟ್ರೋಲ್ಗೆ ಮುಗಿಬಿದ್ದ ಜನರನ್ನು ತರಾಟೆಗೆ ತೆಗೆದುಕೊಂಡರು.