ಕೆಂಪಾಗಿ ಹರಿಯುತ್ತಿರುವ ಗಂಗೆ, ಪ್ರಕೃತಿ ವಿಸ್ಮಯಕ್ಕೆ ಜನ ಬೆರಗು... ಏನಿದರ ಮರ್ಮ? - Gadag Flood water red,
ಉತ್ತರ ಕರ್ನಾಟಕದಲ್ಲಿ ಕಳೆದೆರೆಡು ದಿನಗಳಿಂದ ನಿರಂತರ ಧಾರಾಕಾರ ಮಳೆಗೆ ಸಾಕಷ್ಟು ಅವಾಂತರಗಳು ಸೃಷ್ಟಿಯಾಗಿವೆ. ಆದರೆ, ವಿಚಿತ್ರ ಎನಿಸುವಂತೆ ಅಚ್ಚರಿಯೂ ಸಹ ಪ್ರವಾಹದ ನೀರು ಮೂಡಿ ಬಂದಿದೆ. ಗದಗ ಜಿಲ್ಲೆಯ ಕಪ್ಪತ್ತಗುಡ್ಡ ಪ್ರದೇಶದಲ್ಲಿ ಭಾರಿ ಮಳೆ ಹಿನ್ನೆಲೆ ಹಳ್ಳ-ಕೊಳ್ಳ ಸೇರಿದಂತೆ ಬಾಂದಾರಗಳು ತುಂಬಿ ಹರಿಯುತ್ತಿವೆ. ಹೀಗಾಗಿ ಕಪ್ಪತ್ತಗುಡ್ಡದ ದಡದಲ್ಲಿರುವ ಹಿರೇವಡ್ಡಟ್ಟಿ ಗ್ರಾಮದ ಸಮೀಪದ ಬಾಂದಾರನಲ್ಲಿ ಗಂಗೆ ಕೆಂಪಾಗಿ ಹರಿಯುತ್ತಿದ್ದಾಳೆ. ಇದಕ್ಕೆ ಕಾರಣ ಗಣಿಗಾರಿಕೆ. ಈ ಹಿಂದೆ ಗಣಿಗಾರಿಕೆಯಿಂದ ನಲುಗಿದ್ದ ಕಪ್ಪತ್ತಗುಡ್ಡ ಕೆಂಪು ಬಣ್ಣದ ಮಿಶ್ರಿತ ಮಣ್ಣನ್ನ ಒಳಗೊಂಡಿದೆ. ಹೀಗಾಗಿ ಮಳೆ ನೀರು ಪ್ರವಾಹ ರೀತಿಯಲ್ಲಿ ಹರಿದು ಬರುತ್ತಿದ್ದು, ಗಂಗೆ ಸಹ ಕೆಂಪಾಗಿ ಹರಿಯುತ್ತಿದ್ದಾಳೆ. ಈ ಅಚ್ಚರಿ ಕಂಡು ಸ್ಥಳೀಯರು ಈ ದೃಶ್ಯವನ್ನು ಮೊಬೈಲ್ನಲ್ಲಿ ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದಾರೆ. ವಿಡಿಯೋ ಸದ್ಯ ವೈರಲ್ ಆಗ್ತಿದ್ದು, ಪ್ರಕೃತಿಯ ವಿಸ್ಮಯಕ್ಕೆ ಜನರು ಬೆರಗಾಗಿದ್ದಾರೆ.
Last Updated : Oct 22, 2019, 8:26 PM IST