ಒಳ್ಳೇದ್ ಮಾಡ್ತೀರಂತಾ ವೋಟ್ ಹಾಕಿದ್ವಿ.. ಚಲೋ ಬಟ್ಟೆ ಹಾಕಿ ಕೈಬೀಸಿ ಹೋದ್ರೇ ಹೆಂಗ್.. - ರೋಣ ರೈತನ ಅಳಲು ವಿಡಿಯೋ
ಗದಗ : ಜಿಲ್ಲೆಯಲ್ಲಿ ಸುರಿದ ಮಳೆಗೆ ಜನರ ಬದುಕು ಬೀದಿಗೆ ಬಿದ್ದಿದೆ. ರೋಣ ತಾಲೂಕಿನ ಮೆಣಸಗಿ ಗ್ರಾಮದ ರೈತ ಆಡಳಿತ ವ್ಯವಸ್ಥೆಗೆ ರೋಸಿ ಹೋಗಿ ವಿಡಿಯೋ ಮೂಲಕ ತನ್ನ ಆಕ್ರೋಶ ವ್ಯಕ್ತಪಡಿಸಿದ್ದಾನೆ. ಸಚಿವ ಸಿ ಸಿ ಪಾಟೀಲ್‌ರನ್ನು ತರಾಟೆಗೆ ತೆಗೆದುಕೊಂಡ ರೈತ ಮನೆ ಕೊಡುತ್ತೇನೆ, ಅದು ಇದೂ ಅಂತಾ ಹೇಳಿ ಏನೂ ಕೊಟ್ಟಿಲ್ಲ ಅಂತಾ ಬೇಸರ ವ್ಯಕ್ತಪಡಿಸಿದ್ದಾನೆ. ಮೆಣಸಗಿ ಗ್ರಾಪಂ ಸರಿಯಾಗಿಲ್ಲ, ಅವರನ್ನು ನಂಬಬೇಡಿ ಅಂತಾ ಆರೋಪಿಸಿದ್ದಾನೆ. ಸ್ವಲ್ಪ ರೈತರ ಪರಿಸ್ಥಿತಿ ಕೇಳ್ರಿ ಅಂತಾ ಅಂಗಲಾಚಿದ್ದಾನೆ.