ಗದಗ: ನ್ಯಾಯಾಲಯದಲ್ಲಿ ನಾಗರ ಪ್ರತ್ಯಕ್ಷ
ಗದಗ: ನರಗುಂದ ಪಟ್ಟಣದ ನ್ಯಾಯಾಲಯದೊಳಗೆ ನಾಗರಹಾವು ಕಾಣಿಸಿಕೊಂಡಿದ್ದು, ಕೆಲಕಾಲ ಅಲ್ಲಿ ನೆರೆದವರಲ್ಲಿ ಆತಂಕ ಸೃಷ್ಠಿಯಾಗಿತ್ತು. ಸುಮಾರು 5 ಅಡಿ ಉದ್ದದ ಹಾವನ್ನು ಕಂಡು ವಕೀಲರು, ನ್ಯಾಯಾಲಯದ ಸಿಬ್ಬಂದಿ ಗಲಿಬಿಲಿಗೊಂಡರು. ಈ ಬಗ್ಗೆ ಮಾಹಿತಿ ನೀಡುತ್ತಿದ್ದಂತೆ ಸ್ಥಳೀಯ ಉರಗ ತಜ್ಞ ಹಾಗೂ ಗೃಹ ರಕ್ಷಕ ಸಿಬ್ಬಂದಿ ಬಿ. ಆರ್. ಸುರೇಬಾನ್ ಆಗಮಿಸಿ ಹಾವು ಸೆರೆ ಹಿಡಿದು ಅರಣ್ಯ ಪ್ರದೇಶದತ್ತ ನಡೆದಿದ್ದಾರೆ. ಬಳಿಕ ವಕೀಲರು, ಸಾರ್ವಜನಿಕರು ನಿಟ್ಟುಸಿರು ಬಿಟ್ಟಿದ್ದಾರೆ. ಮಳೆಯಿಂದ ಕೋರ್ಟ್ ಆವರಣದ ಸುತ್ತಲೂ ಗಿಡಗಂಟಿ ಬೆಳೆದಿವೆ. ಅಲ್ಲಲ್ಲಿ ಕೊಳಚೆ ನೀರು ನಿಂತಿದ್ದು, ಕೋರ್ಟ್‌ಗೆ ಹಾವು, ಚೇಳುಗಳು ಬರುತ್ತಿವೆ. ಹಾಗಾಗಿ ಕೂಡಲೇ ಸ್ವಚ್ಛತೆಗೆ ಪುರಸಭೆ ಮುಂದಾಗಬೇಕು ಎಂದು ಸಿಬ್ಬಂದಿ ಆಗ್ರಹಿಸಿದ್ದಾರೆ.