ಪಾರ್ಶ್ವವಾಯುನಿಂದ ಬಳಲುತ್ತಿರುವ ತಂದೆ...ಕುಟುಂಬಕ್ಕೀಗ ಹೆಣ್ಣು ಮಕ್ಕಳೇ ಆಧಾರ!
ಗದಗ: ಕೊರೊನಾ,ಲಾಕ್ಡೌನ್ನಿಂದ ಜನರ ಒಂದಲ್ಲ ಒಂದು ರೀತಿಯ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಇಲ್ಲಿನ ಬೆಟಗೇರಿಯ ಚನ್ನಗೌಡರ ಓಣಿಯಲ್ಲಿ ನೆಲಸಿರುವ ಯಲ್ಲಪ್ಪ ಶಾವಿ ಎಂಬ 80 ವರ್ಷದ ವೃದ್ಧರೊಬ್ಬರು ನೇಕಾರಿಕೆ ಮಾಡಿಕೊಂಡು ಜೀವನ ನಿರ್ವಹಣೆ ಮಾಡುತ್ತಿದ್ದರು. ಆದರೀಗ ಅವರು ಪಾರ್ಶ್ವವಾಯುವಿನಿಂದ ಬಳಲುತ್ತಿದ್ದು, ಇಡೀ ಕುಟುಂಬದ ಹೊಣೆಯನ್ನು ಅವರ ಹೆಣ್ಣು ಮಕ್ಕಳು ನೋಡಿಕೊಳ್ಳುತ್ತಿದ್ದಾರೆ. ಲಾಕ್ಡೌನ್ನಿಂದ ಕೆಲಸವಿಲ್ಲದೇ, ಆದಾಯವಿಲ್ಲದೆ ತಂದೆಯ ಔಷಧ ತೆಗೆದುಕೊಂಡು ಬರಲು ಸಾಧ್ಯವಾಗುತ್ತಿಲ್ಲ. ಜೀವನ ನಡೆಸುವುದು ತುಂಬಾನೆ ದುಸ್ತರವಾಗಿದೆ. ಈ ಕುರಿತೆಂತೆ ಇನ್ನು ಹೆಚ್ಚಿನ ಮಾಹಿತಿಯನ್ನು ತಮ್ಮ ಪ್ರತಿನಿಧಿ ನೀಡುತ್ತಾರೆ.