ಲಾಕ್‌ಡೌನ್ ಉಲ್ಲಂಘಿಸಿದ್ರೆ ಕಠಿಣ ಕ್ರಮ : ಗದಗ ಎಸ್ಪಿ ಖಡಕ್ ವಾರ್ನಿಂಗ್ - ಗದಗದಲ್ಲಿ ಲಾಕ್‌ಡೌನ್
ಗದಗ : ಸುಖಾಸುಮ್ಮನೆ ಲಾಕ್‌ಡೌನ್ ಉಲ್ಲಂಘಿಸಿದ್ರೆ ಕಠಿಣ ಕ್ರಮಕೈಗೊಳ್ಳುವುದಾಗಿ ಎಸ್ಪಿ ಎನ್ ಸತೀಶ್ ಅವರು ಖಡಕ್ ಎಚ್ಚರಿಕೆ ನೀಡಿದ್ದಾರೆ. ಲಾಕ್‌ಡೌನ್ ಉಲ್ಲಂಘಿಸಿದ 150 ಬೈಕ್ ಸೀಜ್ ಮಾಡಿ ಕೇಸ್ ಹಾಕಲಾಗಿದೆ. ಕೊರೊನಾ ವೈರಸ್ ತಡೆಗೆ ಸಾರ್ವಜನಿಕರು ಮನೆಯಲ್ಲಿಯೇ ಇರುವ ಮೂಲಕ ಸಹಕರಿಸಬೇಕು. ತರಕಾರಿ ಹೊತ್ತೊಯ್ಯುವ ಹಾಗೂ ಮಾರಾಟ ಮಾಡುವ ವಾಹನಗಳಿಗೆ ಯಾವುದೇ ಸಮಸ್ಯೆ ಇಲ್ಲ. ಅನಾವಶ್ಯಕ ಸುತ್ತಾಡಿದ್ರೆ ಪರಿಣಾಮ ಸರಿಯಿರಲ್ಲ ಎಂದು ಖಡಕ್ ವಾರ್ನಿಂಗ್ ಮಾಡಿದ್ದಾರೆ.