ಶಾಲಾ ಮಕ್ಕಳಿಗೆ ಪ್ರಾರ್ಥನಾಗೀತೆ ಹೇಳಿಕೊಟ್ಟ ಮಾಜಿ ಡಿಸಿಎಂ ಡಾ. ಜಿ. ಪರಮೇಶ್ವರ್ - G. Parameshwar participate in school building inaguration programme
ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನ ಲಿಂಗದ ವೀರನಹಳ್ಳಿ ಗ್ರಾಮದಲ್ಲಿ ನೂತನ ಸರ್ಕಾರಿ ಪ್ರಾಥಮಿಕ ಶಾಲಾ ಕಟ್ಟಡವನ್ನು ಉದ್ಘಾಟಿಸಲಾಯಿತು. ಕಾರ್ಯಕ್ರಮದ ವೇಳೆ ನಡೆದ ಪೂಜೆಯಲ್ಲಿ ಭಾಗವಹಿಸಿದ್ದ ಮಾಜಿ ಉಪ ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಮಕ್ಕಳಿಂದಲೇ ಶಾಲಾ ಕಟ್ಟಡ ಅನಾವರಣಗೊಳಿಸಿ, ಮಕ್ಕಳಿಂದ ಅಸತೋಮ ಸದ್ಗಮಯ ಎಂಬ ಪ್ರಾರ್ಥನಾಗೀತೆ ಹೇಳಿಸಿದರು.