ಕುಸಿದ ಅಂತರ್ಜಲ ಮಟ್ಟ... ಖಾಸಗಿ ವ್ಯಕ್ತಿಗಳ ಬೋರ್ವೆಲ್ಗಳ ಮೊರೆ ಹೋದ ತುಮಕೂರು ಜಿಲ್ಲಾಡಳಿತ - Water problem
ತುಮಕೂರು ಜಿಲ್ಲೆಯ ಕೆಲ ತಾಲೂಕಿನಲ್ಲಿ 1000 ಅಡಿವರೆಗೆ ಭೂಮಿ ಕೊರೆದರೂ ಸಾಕಾಗುವಷ್ಟು ನೀರು ಸಿಗುವುದು ಕಷ್ಟ. ಬಯಲು ಸೀಮೆಯಲ್ಲಿ ಅಂತರ್ಜಲ ಮಟ್ಟ ಗಣನೀಯ ಪ್ರಮಾಣದಲ್ಲಿ ಕುಸಿದಿದ್ದರಿಂದ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸುವುದು ಜಿಲ್ಲಾಡಳಿತಕ್ಕೆ ಒಂದು ದೊಡ್ಡ ಸವಾಲಾಗಿದೆ. ಹೊಸದಾಗಿ ಕೊರೆದಿರುವ ಬೋರ್ವೆಲ್ಗಳಲ್ಲಿ ನಿರೀಕ್ಷೆಯಂತೆಯೇ ನೀರು ಸಿಗುತ್ತಿಲ್ಲ. ಹೀಗಾಗಿ ಪರ್ಯಾಯ ಮಾರ್ಗವನ್ನು ಕಂಡುಕೊಂಡಿರುವ ಜಿಲ್ಲಾಡಳಿತ, ಖಾಸಗಿ ವ್ಯಕ್ತಿಗಳ ಬೋರ್ವೆಲ್ಗಳ ಮೊರೆ ಹೋಗಿದೆ.