ಶಿಗ್ಗಾವಿಯ ವೃದ್ಧಾಶ್ರಮದಲ್ಲಿ ವೃದ್ಧೆ ನಿಧನ: ಧರ್ಮ ಮೀರಿ ಮಾನವೀಯತೆ ಮೆರೆದ ಅಧಿಕಾರಿ! - haveri news
ಹಾವೇರಿ ಜಿಲ್ಲೆಯ ಶಿಗ್ಗಾವಿ ನಗರದ ವೃದ್ಧಾಶ್ರಮದಲ್ಲಿ 72 ವರ್ಷದ ಅನಾಥ ಅಜ್ಜಿ ಬಾನುಬಿ ನಾಸವಾಲೆ ಇಂದು ನಿಧನರಾಗಿದ್ದರು. ಮೂಲತಃ ಧಾರವಾಡ ಜಿಲ್ಲೆ ಕುಂದಗೋಳದ ಬಾನುಬಿ, ಕಾರಣಾಂತರಗಳಿಂದ ವೃದ್ಧಾಶ್ರಮದಲ್ಲಿ ವಾಸವಾಗಿದ್ದರು. ಇವರು ಸಾವನ್ನಪ್ಪಿದ ವಿಷಯ ವಿಕಲಚೇತನ ಮತ್ತು ಹಿರಿಯ ನಾಗರಿಕ ಇಲಾಖೆಯ ಉಪ ನಿರ್ದೇಶಕ ಮಲ್ಲಿಕಾರ್ಜುನ ಅವರಿಗೆ ಗೊತ್ತಾಗಿದೆ. ತಕ್ಷಣ ಅವರು ಬಾನುಬಿಯ ಅಂತ್ಯ ಸಂಸ್ಕಾರವನ್ನು ಇಸ್ಲಾಂ ಧರ್ಮದ ಸಂಪ್ರದಾಯದಂತೆ ನೆರವೇರಿಸಿದ್ದಾರೆ.