ಚರಂಡಿ ನೀರು ರಸ್ತೆಗೆ ಬಂದರೂ ನೋಡೋರಿಲ್ಲ, ಕೇಳೋರಿಲ್ಲ! - ಬಾಗೇಪಲ್ಲಿ ಪುರಸಭೆ ಸದಸ್ಯರು, ಅಧಿಕಾರಿಗಳ ನಿರ್ಲಕ್ಷ್ಯ
ಮಳೆ ಸ್ವಲ್ಪ ಜಾಸ್ತಿಯಾದರೆ ಸಾಕು ಚರಂಡಿ ಉಕ್ಕಿ ರಸ್ತೆ ಮೇಲೆ ಹರಿಯುತ್ತದೆ. ನಂತರ ತಗ್ಗಿನಲ್ಲಿರುವ ಮನೆಗಳಿಗೆ ನುಗ್ಗಿ ಅಕ್ಷರಶಃ ನರಕಯಾತನೆ ಸೃಷ್ಟಿಸುತ್ತದೆ. ಬಾಗೇಪಲ್ಲಿ ಪಟ್ಟಣದ ಡಾ. ಹೆಚ್.ಎನ್.ವೃತ್ತದಿಂದ ಕೊತ್ತಪಲ್ಲಿ ಕಡೆ ಹೋಗುವ ಮಾರ್ಗದಲ್ಲಿ ಖಾಸಗಿ ಶಾಲೆ ಸಮೀಪದ ರಸ್ತೆ ಬದಿಯ ಮನೆಗಳ ದುಸ್ಥಿತಿ ಇದು. ಅವೈಜ್ಞಾನಿಕ ಚರಂಡಿ ನಿರ್ಮಾಣ ಹಾಗೂ ಕಾಲ ಕಾಲಕ್ಕೆ ಚರಂಡಿಗಳಲ್ಲಿ ತುಂಬಿರುವ ಹೂಳು ತೆಗೆಯದೆ ಇರುವುದರಿಂದಾಗಿ ಈ ಪರಿಸ್ಥಿತಿ ಎದುರಾಗಿದೆ.