ಗಣಿನಾಡು ಬಳ್ಳಾರಿಯಲ್ಲಿ ಶುಕ್ರವಾರದ ಪಾರಿವಾಳ ಮಾರಾಟ ಸಂತೆ... ನೀವೂ ಒಮ್ಮೆ ನೋಡಿ ಬಿಡಿ!
ಬಳ್ಳಾರಿಯ ಕೊಲುಮಿ ಚೌಕ್ನ ಬಳಿ ಪ್ರತಿ ಶುಕ್ರವಾರದಂದು ಪಾರಿವಾಳಗಳ ಮಾರಾಟ ಜೋರಾಗಿ ನಡೆಯುತ್ತದೆ. ಕೇವಲ ಮೂರರಿಂದ ನಾಲ್ಕು ಗಂಟೆಗಳ ಕಾಲ ನಡೆಯುವ ಈ ಸಂತೆಯಲ್ಲಿ ಒಂದು ಪಾರಿವಾಳವನ್ನ 100 ರಿಂದ 500 ರೂಪಾಯಿಗಳವರೆಗೆ ಮಾರಾಟ ಮಾಡಲಾಗುತ್ತೆ. ಪಾರಿವಾಳ ಮಾರಾಟ ಮಾಡಲು ಮತ್ತು ಖರೀದಿಸಲು ಯುವಕರು, ವಯಸ್ಕರು ಹೊಸಪೇಟೆ ಹಾಗೂ ಬಳ್ಳಾರಿ ನಗರದ ವಿವಿಧ ಪ್ರದೇಶಗಳಾದ ಕೌಲ್ ಬಜಾರ್, ಬಂಡಿಮೊಟ್, ಬಂಡಿಹಟ್ಟಿ, ರೇಡಿಯೋ ಪಾರ್ಕ್ಗಳಿಂದ ಆಗಮಿಸುತ್ತಾರೆ.