ಫ್ರೀ ಕಾಶ್ಮೀರ ಫಲಕ ಪ್ರಕರಣ: ತನಿಖೆಗೆ ಹಾಜರಾದ ಯುವತಿ - ಫ್ರೀ ಕಾಶ್ಮೀರ ಘೋಷಣ ಫಲಕ
ಮೈಸೂರು: ಫ್ರೀ ಕಾಶ್ಮೀರ ನಾಮ ಫಲಕ ಪ್ರದರ್ಶನಕ್ಕೆ ಸಂಬಂಧಿಸಿದಂತೆ ಯುವತಿ ತಂದೆಯೊಂದಿಗೆ ಜಯಲಕ್ಷ್ಮಿ ಪುರಂ ಠಾಣೆಗೆ ಹಾಜರಾಗಿದ್ದಾಳೆ. ಮೈಸೂರು ವಿಶ್ವವಿದ್ಯಾನಿಲಯದ ಕ್ಲಾಕ್ ಟವರ್ ಬಳಿ ಜೆಎನ್ಯು ವಿದ್ಯಾರ್ಥಿಗಳ ಮೇಲೆ ನಡೆದ ಹಲ್ಲೆ ಖಂಡಿಸಿ ನಡೆದ ಪಂಜಿನ ಮೆರವಣಿಗೆ ಸಂದರ್ಭದಲ್ಲಿ ಫ್ರೀ ಕಾಶ್ಮೀರ ಘೋಷಣೆ ಫಲಕ ಹಿಡಿದ ಪ್ರಕರಣ ಮಾಧ್ಯಮಗಳಲ್ಲಿ ಸುದ್ದಿಯಾಗಿತ್ತು. ಆ ಬಳಿಕ ಎಚ್ಚೆತ್ತ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದರು. ನಿನ್ನೆ ಸಂಜೆ ಮೈಸೂರು ನ್ಯಾಯಾಲಯದಿಂದ ಮಧ್ಯಂತರ ಜಾಮೀನು ಪಡೆದಿರುವ ನಳಿನಿ ಬಾಲಕೃಷ್ಣ. ನಂತರ ಜಯಲಕ್ಷ್ಮಿ ಪುರಂ ಠಾಣಾಧಿಕಾರಿಗಳ ಮುಂದೆ ಹಾಜರಿದ್ದು ತಂದೆಯೊಂದಿಗೆ ತನಿಖೆಗೆ ಆಗಮಿಸಿದ್ದಾಳೆ.
Last Updated : Jan 11, 2020, 5:16 PM IST