ಹಸಿದವರಿಗೆ ಆಹಾರ... ಬಳ್ಳಾರಿ ಹನುಮಾನ್ ಪೆಟ್ರೋಲ್ ಬಂಕ್ ಕಾರ್ಯಕ್ಕೆ ಜನರ ಮೆಚ್ಚುಗೆ - ಕೊರೊನಾ ವೈರಸ್
ಬಳ್ಳಾರಿ: ಇದ್ದಾಗ ಹಂಚಿಕೊಂಡು ತಿನ್ನುವುದು ಮಾನವೀಯತೆ. ಕೈಲಾದಷ್ಟು ಕಷ್ಟದಲ್ಲಿರುವವರಿಗೆ ನೀಡು ಎನ್ನುವಂತೆ ಲಾಕ್ಡೌನ್ನಿಂದಾಗಿ ಆಹಾರ ಸಿಗದೆ ಪರದಾಡುತ್ತಿರುವವರಿಗೆ ನಗರದ ಹನುಮಾನ್ ಪೆಟ್ರೋಲ್ ಬಂಕ್ ಮಾಲೀಕ ಸರೋಜ್ಕುಮಾರ್ ಅವರು ಉಚಿತವಾಗಿ ಊಟ ವಿತರಿಸುವ ಮೂಲಕ ಹಸಿದವರ ಹೊಟ್ಟೆ ತುಂಬಿಸುತ್ತಿದ್ದಾರೆ. ಪ್ರತಿನಿತ್ಯ ಮಧ್ಯಾಹ್ನ ಮತ್ತು ಸಂಜೆ 150 ರಿಂದ 200 ಫುಡ್ ಪ್ಯಾಕೇಟ್ ನೀಡುವ ಮೂಲಕ ಸಹಾಯ ಹಸ್ತ ಚಾಚಿದ್ದಾರೆ.