ಕೊರೊನಾ ಎಫೆಕ್ಟ್: ಹುಬ್ಬಳ್ಳಿಯಲ್ಲಿ ಉಚಿತವಾಗಿ ಕೋಳಿ ಹಂಚಿಕೆ! - Free Chicken Distribution in Hubli for corona effect
ಹುಬ್ಬಳ್ಳಿ: ಚಿಕನ್ ತಿನ್ನುವುದರಿಂದ ಕೊರೊನಾ ಬರುತ್ತದೆ ಎಂಬ ಸುದ್ದಿ ಹಬ್ಬುತ್ತಿದಂತೆ ಚಿಕನ್ ತಿನ್ನುವವರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದ್ದು, ಚಿಕನ್ ಬೆಲೆ ಪಾತಾಳಕ್ಕೆ ಇಳಿದಿದೆ. ಕೋಳಿ ಖರೀದಿಸಲು ಜನರು ಹಿಂದೇಟು ಹಾಕುತ್ತಿದ್ದಾರೆ. ಹೀಗಾಗಿ ಇಂದು ಹಳೇ ಹುಬ್ಬಳ್ಳಿಯ ಆನಂದ ನಗರದಲ್ಲಿ ಕೋಳಿ ಸಾಕಾಣಿಕೆದಾರರೊಬ್ಬರು, ತಮ್ಮ ವಾಹನದಲ್ಲಿಯೇ ಕೋಳಿಗಳನ್ನು ತೆಗೆದುಕೊಂಡು ಬಂದು ಜನರಿಗೆ ಹಂಚಿದ್ದಾರೆ.