ಕರ್ನಾಟಕ

karnataka

ETV Bharat / videos

ನೆರೆ ಪರಿಹಾರದಲ್ಲೂ ಗೋಲ್​ಮಾಲ್​: ಬಾಗಲಕೋಟೆಯಲ್ಲಿ ಪ್ರವಾಹ ಪೀಡಿತರ ಪ್ರತಿಭಟನೆ - flood victims

By

Published : Sep 2, 2019, 6:20 PM IST

ಬಾಗಲಕೋಟೆ: ನೆರೆ ಪ್ರವಾಹದಿಂದ‌ ಜಮಖಂಡಿ ತಾಲೂಕಿನ ಕುಂಬಾರಹಳ್ಳ ಗ್ರಾಮವು ಜಲಾವೃತಗೊಂಡಿತ್ತು. ಇದರಿಂದ ಸುಮಾರು 175 ರಿಂದ 180 ಮನೆಗಳು ಹಾನಿಗೆ ಒಳಗಾಗಿದ್ದವು. ಆದರೆ, ಸರ್ಕಾರ ಕೇವಲ 100 ಮನೆಗಳಿಗೆ ಪರಿಹಾರ ನೀಡಿದೆ. ಕೆಲವು ಕಡೆ ನೀರು ಬಾರದ ಮನೆಗೂ ಪರಿಹಾರ ನೀಡಿದೆ. ಆದರೆ, ಸುಮಾರು 70ರಿಂದ 80 ಮನೆಗಳಿಗೆ ನೀರು ತುಂಬಿದ್ದರೂ ಪರಿಹಾರ ನೀಡಿಲ್ಲ ಎಂದು ಗ್ರಾಮಸ್ಥರು ಪ್ರತಿಭಟನೆ ಮಾಡಿದರು. ಈ ಎಲ್ಲ ಬೇಜವಾಬ್ದಾರಿ ಕೆಲಸಗಳಿಗೆ ಕುಂಬಾರಹಳ್ಳಿ ಪಿಡಿಒ ಕಾರಣ ಎಂದು ಆರೋಪಿಸಿದ ಗ್ರಾಮಸ್ಥರು ಗ್ರಾಮ ಪಂಚಾಯತ್ ಕಚೇರಿಗೆ ಬೀಗ ಹಾಕಿ ಪ್ರತಿಭಟನೆ ನಡೆಸಿದರು. ಕೂಡಲೇ ಈ ತಾರತಮ್ಯ ಸರಿಪಡಿಸುವಂತೆ ಆಗ್ರಹಿಸಿದರು.

ABOUT THE AUTHOR

...view details