ಶಿವಮೊಗ್ಗದಲ್ಲಿ ಲಾಂಗ್ ಝಳಪಿಸಿ ಪೊಲೀಸರಿಗೆ ಅವಾಜ್ ಹಾಕಿದ ಪುಂಡರು: ವಿಡಿಯೋ ವೈರಲ್ - Four youths threaten on Shivamogga police,
ಶಿವಮೊಗ್ಗದಲ್ಲಿ ಮೂರ್ನಾಲ್ಕು ಜನ ಪಡ್ಡೆ ಹುಡುಗರು ಹುಕ್ಕಾ ಮತ್ತು ಪಾನಗೋಷ್ಠಿ ಮಾಡುತ್ತಾ ಪೊಲೀಸ್ ಸಿಬ್ಬಂದಿ ಮತ್ತು ಕೆಲವರಿಗೆ ಬೆದರಿಕೆ ಹಾಕಿರುವ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ. ಬಣ್ಣದಂಗಡಿಯೊಂದರಲ್ಲಿ ಕುಳಿತು ಮದ್ಯದ ಜತೆ ಹುಕ್ಕಾ ಸೇವಿಸುತ್ತಿರುವ ಯುವಕರು ಅಪರಾಧ ವಿಭಾಗದ ಕೆಲ ಪೊಲೀಸರ ಹೆಸರು ಉಲ್ಲೇಖಿಸಿ ಬೆದರಿಕೆ ಹಾಕಿದ್ದಾರೆ. ಶಿವಮೊಗ್ಗದಲ್ಲಿ ಇನ್ನು ಮುಂದೆ ನಮ್ಮದೆ ಹವಾ ಇರಬೇಕು. ಮಾರ್ಕೆಟ್ ಲೋಕಿ ರೆಕಾರ್ಡ್ ಮುರಿತೀವಿ. ರೌಡಿಶೀಟರ್ ಕಡೆಕಲ್ ಅಬೀದ್ನ ಮುಗಿಸುತ್ತೇವೆ. ಶಿವಮೊಗ್ಗದಲ್ಲಿ ಶೇಕ್ ಅಹಮದ್ ಅಲಿಯಾಸ್ ಶಾರು ಹೆಸರು ಮಾತ್ರ ಇರಬೇಕು ಎಂದು ಎಚ್ಚರಿಕೆ ಧ್ವನಿಯಲ್ಲಿ ಮಾತನಾಡಿದ್ದಾರೆ. ಈ ಕುರಿತು ಪೊಲೀಸ್ ವರಿಷ್ಠಾಧಿಕಾರಿಗಳನ್ನು ಕೇಳಿದರೆ, ವಿಡಿಯೋ ಮಾಡಿದ ಯುವಕರು ತಲೆ ಮರೆಸಿಕೊಂಡಿದ್ದಾರೆ. ಅವರ ಮೇಲೆ ಶಿಸ್ತು ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ.