ನಾಲ್ಕು ಕಾಲುಗಳ ವಿಚಿತ್ರ ಕೋಳಿ ಮರಿ ಜನನ - ನಾಲ್ಕು ಕಾಲುಗಳಿಂದ ಜನಿಸಿದ ಕೋಳಿ ಮರಿ
ತುಮಕೂರು: ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನಲ್ಲಿ ಕೋಳಿ ಮರಿಯೊಂದು ನಾಲ್ಕು ಕಾಲುಗಳೊಂದಿಗೆ ಜನಿಸಿ ಆಶ್ಚರ್ಯ ಮೂಡಿಸಿದೆ. ಪಟ್ಟಣದ ಕಾಮಾಕ್ಷಮ್ಮ ಎಂಬವರ ಮನೆಯಲ್ಲಿ ಈ ಕೋಳಿ ಜನಿಸಿದೆ. ಒಂದು ರೀತಿ ಅಂಗವಿಕಲತೆಯಿಂದ ಕೋಳಿ ಮರಿ ಹುಟ್ಟಿದೆ ಎಂದೇ ಹೇಳಲಾಗುತ್ತಿದೆ.