ಕಾವೇರಿ ಕೂಗಿಗೆ ಧ್ವನಿಗೂಡಿಸಿದ ಸಾರ್ವಜನಿಕರು: ಸಲಹೆ ನೀಡಿದ ಜಗ್ಗಿ ವಾಸುದೇವ್ - mysur news 2019
ಮೈಸೂರು: ಕಾವೇರಿ ಕೂಗಿಗೆ ಸಾರ್ವಜನಿಕರು ಪ್ಲೇಕಾರ್ಡ್ಗಳನ್ನು ಪ್ರದರ್ಶಿಸುವ ಮೂಲಕ ಕೂಗಿಗೆ ಧ್ವನಿಗೂಡಿಸಿದರು.ಮಾನಸ ಗಂಗೋತ್ರಿಯಲ್ಲಿರುವ ಬಯಲು ರಂಗಮಂದಿರದಲ್ಲಿ ಈಶ್ ಫೌಂಡೇಶನ್ ವತಿಯಿಂದ ಏರ್ಪಡಿಸಿದ್ದ ಕಾವೇರಿ ಕೂಗು ಅಭಿಯಾನದಲ್ಲಿ ಫೌಂಡೇಶನ್ ಅಧ್ಯಕ್ಷರಾದ ಜಗ್ಗಿ ವಾಸುದೇವ್ ಮಾತನಾಡಿ, ಮಳೆಯೇ ನಮ್ಮ ಜೀವನ, ಅದನ್ನು ಕಾಪಾಡಿಕೊಂಡು ಹೋಗಬೇಕು. ನದಿ ಮೂಲಗಳು ಉಳಿಯಬೇಕಾದರೆ ಮಳೆ ಕಾಲ ಕಾಲಕ್ಕೆ ಆಗುವಂತೆ ನೋಡಿಕೊಳ್ಳಬೇಕು ಎಂದು, ಪರಿಸರ ಉಳಿಸಿ ಮರಗಳನ್ನು ಬೆಳಸಿ ಎಂದು ಸಲಹೆ ನೀಡಿದರು.