ಉತ್ತರ ಕರ್ನಾಟಕದ ನೆರೆ ಸಂತ್ರಸ್ತರಿಗೆ ನೆರವಾದ ಕೋಟೆನಾಡಿನ ವಿದ್ಯಾರ್ಥಿಗಳು - ಜಿಲ್ಲಾಧಿಕಾರಿ ವಿನೋತ್ ಪ್ರಿಯಾ
ಉತ್ತರ ಕರ್ನಾಟಕದಲ್ಲಿ ಪ್ರಕೃತಿ ವಿಕೋಪದಿಂದ ತೊಂದರೆಗೆ ಸಿಲುಕಿರುವ ನೆರೆ ಸಂತ್ರಸ್ತರಿಗೆ ಚಿತ್ರದುರ್ಗದ ಸರ್ಕಾರಿ ಕಲಾ ಹಾಗೂ ವಿಜ್ಞಾನ ಕಾಲೇಜುಗಳ ವಿದ್ಯಾರ್ಥಿಗಳು ನೆರವಾಗಿದ್ದಾರೆ. 50 ಸಾವಿರ ರೂ. ದೇಣಿಗೆಯನ್ನು ದಾನಿಗಳ ಬಳಿ ಎತ್ತುವ ಮೂಲಕ ನೆರೆ ಸಂತ್ರಸ್ತರಿಗೆ ಬಟ್ಟೆ, ಬೆಡ್ ಶೀಟ್, ಬಿಸ್ಕೇಟ್, ಮೆಡಿಸಿನ್, ಆಹಾರ ಪದಾರ್ಥಗಳನ್ನು ಕಳುಹಿಸಿ ಕೊಡಲಾಯಿತು. ಇದರಲ್ಲಿ ಹೆಚ್ಚು ಎನ್ಸಿಸಿ ವಿದ್ಯಾರ್ಥಿಗಳಿದ್ದು, ಜಿಲ್ಲಾಧಿಕಾರಿ ವಿನೋತ್ ಪ್ರಿಯಾ ಮುಖಾಂತರ ಅಗತ್ಯ ಸಾಮಗ್ರಿಗಳನ್ನು ಕಳುಹಿಸಿ ಕೊಡಲಾಯಿತು.