ಹಿರೇಕೆರೂರಿನಲ್ಲಿ ನಾನು ಬಿ.ಸಿ.ಪಾಟೀಲ್ ಜೋಡೆತ್ತಿನಂತೆ ಕೆಲಸ ಮಾಡ್ತೇವೆ: ಮಾಜಿ ಶಾಸಕ ಬಣಕಾರ - UB Banakar reaction about verdict of Disqualified MLA's
ಹಾವೇರಿ: ಹಿರೇಕೆರೂರು ಅನರ್ಹ ಶಾಸಕ ಬಿ.ಸಿ.ಪಾಟೀಲ್ ಚುನಾವಣೆಗೆ ಸ್ಪರ್ಧಿಸಲು ಅವಕಾಶ ನೀಡಿರುವ ಸುಪ್ರೀಂ ಕೋರ್ಟ್ ತೀರ್ಪಿಗೆ ಮಾಜಿ ಶಾಸಕ ಯು.ಬಿ.ಬಣಕಾರ ಪ್ರತಿಕ್ರಿಯಿಸಿದ್ದು, ಇಂದು ಬೆಂಗಳೂರಿನಲ್ಲಿ ಬಿಜೆಪಿ ಕೋರ್ ಕಮಿಟಿ ಸಭೆ ಇದೆ. ಸಭೆಯಲ್ಲಿ ನಾಯಕರು ಯಾವ ತೀರ್ಮಾನ ಕೈಗೊಳ್ಳುತ್ತಾರೋ ಅದಕ್ಕೆ ನಾನು ಬದ್ಧ. ನಾನು ಮತ್ತು ಬಿ.ಸಿ.ಪಾಟೀಲ್ ಹಿರೇಕೆರೂರು ಕ್ಷೇತ್ರದಲ್ಲಿ ಜೋಡೆತ್ತಿನಂತೆ ಪಕ್ಷದ ಪರ ಕೆಲಸ ಮಾಡುತ್ತೇವೆ ಎಂದರು. ಇದೇ ವೇಳೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವ ವಿಚಾರವನ್ನು ತಳ್ಳಿಹಾಕಿದ್ದಾರೆ.