ನೆರೆ ಸಂತ್ರಸ್ತರ ಜೊತೆ ಹುಟ್ಟುಹಬ್ಬ ಆಚರಿಸಿಕೊಂಡ ಮಾಜಿ ಶಾಸಕ ಮಾನಪ್ಪ ವಜ್ಜಲ್! - ಮಾಜಿ ಶಾಸಕ ಮಾನಪ್ಪ ವಜ್ಜಲ್
ರಾಯಚೂರಿನ ಲಿಂಗಸೂಗೂರಿನಲ್ಲಿ ಮಾಜಿ ಶಾಸಕ ಮಾನಪ್ಪ ವಜ್ಜಲ್ ಅವರು ತಮ್ಮ ಹುಟ್ಟುಹಬ್ಬವನ್ನು ವಿಭಿನ್ನ ಹಾಗೂ ಸರಳವಾಗಿ ಸಂತ್ರಸ್ತರೊಂದಿಗೆ ಆಚರಿಸಿಕೊಂಡರು. ಗೋನವಾಟ್ಲಾ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ತೆರೆಯಲಾದ ಗಂಜಿ ಕೇಂದ್ರದಲ್ಲಿ ಹುಟ್ಟುಹಬ್ಬಬವನ್ನು ಆಚರಿಸಿಕೊಂಡ ಶಾಸಕರು ನಿರಾಶ್ರಿತರಿಗೆ ತಮ್ಮ ಕೈಯಾರೆ ಊಟ ಬಡಿಸಿ ಸಂಭ್ರಮಿಸಿದರು. ಈ ವರ್ಷ ತಾಲೂಕಿನಲ್ಲಿ ನೆರೆಗೆ ಐದಾರು ಗ್ರಾಮಗಳು ಜಲಾವೃತವಾಗಿ ಗ್ರಾಮಸ್ಥರ ಬದುಕು ದುಸ್ತರವಾಗಿದೆ. ಗೋನವಾಟ್ಲಾ ಗ್ರಾಮದಲ್ಲಿ ಕೃಷ್ಣನದಿ ಪ್ರವಾಹದಿಂದ ಗ್ರಾಮಸ್ಥರು ತತ್ತರಿಸಿದ್ದು, ಇಂತಹ ಪರಿಸ್ಥಿತಿಯಲ್ಲಿ ಅದ್ಧೂರಿಯಾಗಿ ಆಚರಣೆ ಮಾಡುವುದು ಬೇಡವೆಂದು ತೀರ್ಮಾನಿಸಿದ ವಜ್ಜಲ್ ಮಾನಪ್ಪ ಸಂತ್ರಸ್ತರ ಜೊತೆಗೆ ಊಟ ಮಾಡಿ, ಸಂತ್ರಸ್ತರಿಗೆ ಅಗತ್ಯ ವಸ್ತುಗಳನ್ನು ವಿತರಿಸಿದರು.