ಶ್ರೀ ಶಿವೈಕ್ಯ ಎಂದು ಘೋಷಿಸಿ ಜನರ ಆಕ್ರೋಶಕ್ಕೆ ಗುರಿಯಾದ ಮಾಜಿ ಶಾಸಕ! - ಪೇಜಾವರ ಶ್ರೀ ಶಿವೈಕ್ಯರಾಗಿದ್ದಾರೆಂದು ಘೋಷಿಸಿದ ಗೋವಿಂದಪ್ಪ
ಮಾಜಿ ಶಾಸಕ ಬಿ.ಜಿ ಗೋವಿಂದಪ್ಪ ತುಂಬಿದ ಸಭೆಯಲ್ಲಿ ಪೇಜಾವರ ಶ್ರೀ ಶಿವೈಕ್ಯರಾಗಿದ್ದಾರೆಂದು ಘೋಷಿಸಿ ಮೌನಾಚರಣೆಯನ್ನು ಮಾಡಿರುವ ಘಟನೆಗೆ ಹೊಸದುರ್ಗ ಸಾಕ್ಷಿಯಾಗಿದೆ. ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ಪಟ್ಟಣದ ಜಾಮಿಯಾ ಮಸೀದಿ ಆವರಣದಲ್ಲಿ ನಿನ್ನೆ ಸಂಜೆ ನಡೆದ ಸಭೆಯಲ್ಲಿ ಈ ಘಟನೆ ಜರುಗಿದ್ದು, ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ನಡೆದ ಸಭೆ ವೇಳೆ ಮೌನಾಚರಣೆ ನಡೆಸಲಾಗಿದೆ. ಮಾಜಿ ಶಾಸಕರು ಹೇಳಿದ್ದಂತೆ ಅಲ್ಪಸಂಖ್ಯಾತರು ಮೌನಾಚರಣೆಗೆ ಜಾರಿದ್ದಾರೆ. ಅದ್ರೇ ಮಾಜಿ ಕೈ ಶಾಸಕ ಗೋವಿದಂಪ್ಪ ಮಾಡಿರುವ ಮೌನಾಚರಣೆಯ ವಿಡಿಯೋ ಸಾಮಾಜಿಕ ಜಾತಾಣದಲ್ಲಿ ಭಾರಿ ವೈರಲ್ ಆಗಿದ್ದು, ಸಾಕಷ್ಟು ಜನರ ಆಕ್ರೋಶಕ್ಕೆ ಕಾರಣವಾಗಿದೆ.